ಯಶಸ್ಸಿಗೆ ಸಹನೆ ಯಾಕೆ ಬೇಕು

 

ಈ ಲೋಕದಲ್ಲಿ ಪ್ರತಿಯೊಬ್ಬರೂ ಯಶಸ್ವಿಯಾಗಬೇಕು ಎಂದು ಕನಸು ಕಾಣುತ್ತಾರೆ. ಆದರೆ ಯಶಸ್ಸು ಒಂದು ದಿನದಲ್ಲಿ ಸಿಗುವುದಿಲ್ಲ. ಅದಕ್ಕೆ ಮುಖ್ಯವಾದ ಗುಣವೆಂದರೆ ಸಹನೆ.

ಸಹನೆ ಎಂದರೆ ಕಷ್ಟ ಬಂದಾಗ ಕೂಡ ಮನಸ್ಸು ಬಿಡದೆ ಮುಂದುವರಿಯುವುದು. ಜೀವನದಲ್ಲಿ ಎಷ್ಟು ಅಡಚಣೆಗಳು ಬಂದರೂ ಧೈರ್ಯದಿಂದ ಎದುರಿಸುವುದು ಸಹನೆ. ಹಲವರು ಮೊದಲ ವಿಫಲತೆಯಲ್ಲೇ ನಿಲ್ಲುತ್ತಾರೆ. ಆದರೆ ಗೆಲ್ಲುವವರು ಮಾತ್ರ ಸೋಲನ್ನು ಪಾಠವಾಗಿ ತೆಗೆದುಕೊಂಡು ಮುಂದೆ ಸಾಗುತ್ತಾರೆ.

ಉದಾಹರಣೆಗೆ, ವಿದ್ಯಾರ್ಥಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆ ಅದು ಅಂತ್ಯವಲ್ಲ. ಸೋಲು ಅಂತ್ಯವಲ್ಲ, ಅದು ಒಂದು ಪಾಠ. ರೈತನು ಬೀಜ ಬಿತ್ತಿದ ತಕ್ಷಣ ಬೆಳೆ ಬರೋದಿಲ್ಲ. ಅವನು ಸಹನೆಯಿಂದ ಕಾಯಬೇಕು. ಅದೇ ರೀತಿ ನಮ್ಮ ಕನಸುಗಳು ಕೂಡ ಸಮಯ ಬಂದಾಗಲೇ ನೆರವೇರುತ್ತವೆ.

ಸಹನೆ ಇರುವ ವ್ಯಕ್ತಿ ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತಾನೆ. ಕೋಪ, ಅತುರ, ನಿರಾಶೆ ಇವು ನಮ್ಮ ಬೆಳವಣಿಗೆಗೆ ಅಡ್ಡಿ. ಆದ್ದರಿಂದ ಪ್ರತಿದಿನವೂ ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಬೇಕು.

ಕೊನೆಯಲ್ಲಿ ಹೇಳುವುದಾದರೆ: ಸಹನೆ ಇರುವಾಗ ಯಶಸ್ಸು ಖಚಿತ.

ಈ ಲೇಖನ ನಿಮಗೆ ಇಷ್ಟವಾದರೆ Like ಮಾಡಿ.

ನಿಮ್ಮ ಅಮೂಲ್ಯ ಅನಿಸಿಕೆಗಳನ್ನು ಕಾಮೆಂಟ್‌ನಲ್ಲಿ ಹಂಚಿಕೊಳ್ಳಿ.

ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ

Comments

Popular posts from this blog

ಗ್ಯಾರೆಂಟಿ ಯೋಜನೆ ಉದ್ಯೋಗ ಕೊರತ ಮತ್ತು ಯುವಕರ ಭವಿಷ್ಯ

ಉದ್ಯೋಗವೇ ನಿಜವಾದ ಗ್ಯಾರಂಟಿ ಗ್ಯಾರಂಟಿ ಯೋಜನೆಗಿಂತ ಮುಖ್ಯವೇನು,?_

ಸತ್ತ ಇಲ್ಲಿಂದ ಶ್ರೀಮಂತ ನಾದ ಹುಡುಗನ ಪರಿಶ್ರಮ ಪ್ರೇರಣಾದಾಯಕ ಕಥೆ