ಗ್ಯಾರೆಂಟಿ ಯೋಜನೆ ಉದ್ಯೋಗ ಕೊರತ ಮತ್ತು ಯುವಕರ ಭವಿಷ್ಯ
ಇಂದಿನ ಕಾಲದಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ಇವು ಬಡವರಿಗೆ ಸಹಾಯವಾದರೂ, ಯುವಕರಿಗೆ ಶಾಶ್ವತ ಉದ್ಯೋಗ ಸಿಗದೇ ಇರುವ ಸಮಸ್ಯೆ ಮುಂದುವರಿದಿದೆ.
ಬಹುತೇಕ ಸರ್ಕಾರಿ ಹುದ್ದೆಗಳು ಸಮಯಕ್ಕೆ ಕರೆಯಲಾಗುತ್ತಿಲ್ಲ.
ಈ ನಡುವೆ ಅನೇಕ ಯುವಕರು ವಯೋಮಿತಿಯನ್ನು ದಾಟುತ್ತಿದ್ದಾರೆ.
ಇದು ಯುವಕರಲ್ಲಿ ನಿರಾಶೆಯನ್ನು ಉಂಟುಮಾಡುತ್ತಿದೆ.
ಕೆಲವರು ಸುಲಭವಾಗಿ ಹಣ ಸಿಗುತ್ತದೆ ಎಂಬ ಮನೋಭಾವದಿಂದ ಉದ್ಯೋಗ ಹುಡುಕುವ ಉತ್ಸಾಹ ಕಳೆದುಕೊಳ್ಳುತ್ತಿರುವುದು ಕೂಡ ಸತ್ಯ.
ಆದರೆ ಎಲ್ಲ ಯುವಕರನ್ನೂ ಒಂದೇ ರೀತಿಯಲ್ಲಿ ನೋಡುವುದು ಸರಿಯಲ್ಲ.
ಸರ್ಕಾರ ಸಮಯಕ್ಕೆ ನೇಮಕಾತಿ ನಡೆಸಬೇಕು.
ಯುವಕರು ಕೂಡ ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಮತ್ತು ಪರಿಶ್ರಮದ ದಾರಿಗೆ ನಡೆಯಬೇಕು.
ಯುವಕರ ಶಕ್ತಿ ದೇಶದ ಶಕ್ತಿ.
ಅವರಿಗೆ ಅವಕಾಶ ನೀಡುವುದು ಸರ್ಕಾರದ ಜವಾಬ್ದಾರಿ, ಅದನ್ನು ಬಳಸಿಕೊಳ್ಳುವುದು ಯುವಕರ ಕರ್ತವ್ಯ.
Comments
Post a Comment